Veerashaiva Sahakari Bank

About Us

Our History

ಪ್ರಗತಿಯ ಪಥದಲ್ಲಿ ಮುನ್ನುಗ್ಗುತ್ತಿರುವ ಬೆ೦ಗಳೂರಿನ ವೀರಶೈವ ಸಹಕಾರಿ ಬ್ಯಾಂಕ್‌:
ರಾಷ್ಟ್ರವ್ಯಾಪಿ ಹರಡಿದ ಅಭಾವ ಪರಿಸ್ಥಿತಿಯ ಕಾಲದಲ್ಲ ಪರಿಹಾರ ಹುಡುಕಲು ಬೆ೦ಗಳೂರಿನ ಪ್ರಮುಖ ಗಣ್ಯರು, ಸಮಾಜ ಸೇವಕರು, ನಿಸ್ವಾರ್ಥಿಗಳು ಒ೦ದು ಕಡೆ ಸೇರಿ ಚಿ೦ತನೆ ಮಾಡಿ ದಿನಾ೦ಕ 30-09-1943 ರಲ್ಲಿ “ವೀರಶೈವ ಕೋ-ಆಪರೇಟಿವ್ ಸೊಸೈಟಿ ” ಯನ್ನು ಸ್ಥಾಪಿಸಿದರು.

ಜಾತಿಯ ಆಧಾರದ ಮೇಲೆ ಸಂಸ್ಥೆಗಳನ್ನು ಸ್ಥಾಪಿಸಲು ಅ೦ದು ಸರ್ಕಾರ ಅನುಮತಿ ನೀಡುತ್ತಿತ್ತು. ಆ ಕಾಲದಲ್ಲ ಜನರನ್ನು ಸಂಘಟಸಲು ಜಾತಿ ಒಂದು ಅಸ್ತ್ರವಾಗಿತ್ತು. ಜಾತಿಗೊಂದು ಸ೦ಸ್ಥೆ ಹುಟ್ಟಿದವು. ಇಂಥಾ ಸ೦ಸ್ಥೆಗಳನ್ನು ಕಟ್ಟುವಾಗ ಇದರ ಹಿ೦ದೆ ಸಮಾಜ ಕಲ್ಯಾಣದ ಉದ್ದೇಶವಿತ್ತು. ಅಣ್ಣ ಬಸವಣ್ಣನವರ ವಾಣಿಯಂತೆ “ಇವನಾರವ, ಇವನಾರವ, ಇವನಾರವ ಎನ್ನದೆ ಇವ ನಮ್ಮವ ಇವ ನಮ್ಮವ” ಎ೦ಬ ಭಾವನೆಂಬ೦ದ ಸ೦ಕಷ್ಟಕ್ಕೆ ಒಳಗಾದವರಿಗೆ ಸಹಾಯ ಹಸ್ತ ನೀಡುವ ಸಮಾನ ಮನಸ್ಸಿನ ವಿಶಾಲ ಹೃದಯ ಹೊಂದಿದ ಹಲವು ಗಣ್ಯ ಮಹನೀಯರ ಪ್ರಯತ್ನದ ಫಲದಿಂದ ಈ ಸೊಸೈಟಿ ಉಗಮವಾಯುತು.

ಬ್ಯಾಂಕಿಂಗ್‌ ಶಾಖೆ ಉದಯ:
1960 ರಲ್ಲಿ ಗಣ್ಯರುಗಳ ಚಿ೦ತನೆಯ ಫಲವಾಗಿ “ಬ್ಯಾಂಕಿ೦ಗ್‌” ಶಾಖೆ ಪ್ರಾರಂಭವಾಯಿತು. ಆಹಾರ ಧಾನ್ಯಗಳ ವಿತರಣೆಯ ಜೊತೆಗೆ ಆರ್ಥಿಕ ನೆರವನ್ನು ಒದಗಿಸುತ್ತಾ ಬ೦ದು ಈ ಬ್ಯಾಂಕಿಂಗ್‌ ಶಾಖೆ ಉತ್ತಮವಾಗಿ ಬೆಳೆದ ಪರಿಣಾಮ ಸರ್ಕಾರ ಈ ವ್ಯವಹಾರವನ್ನು ಪಡಿತರ ವ್ಯವಹಾರದ ಸ೦ಸ್ಥೆಯಿ೦ದ ಬೇರ್ಪಡಿಸಲು ಆದೇಶ ನೀಡಿದ ಪರಿಣಾಮ 1971 ರಲ್ಲಿ “ವೀರಶೈವ ಕೋ-ಆಪರೇಟವ್‌ ಕ್ರೆಡಿಟ್‌ ಸೊಸ್ಯೆಟಿ ಲಿ .” ಉದಯಸಿತು.

ಶ್ರೀ ಬಿ. ಎಸ್‌. ಪರಮಶಿವಯ್ಯರವರ ಆಗಮನ:
ದಿನಾ೦ಕ 26-12-1976 ರಲ್ಲಿ ನಡೆದ ಆಡಳತ ಮಂಡಳಿ ಚುನಾವಣಿಯಲ್ಲಿ ಯುವ ನಾಯಕರಾಗಿದ್ದ ಶ್ರೀ ಬಿ.ಎಸ್‌.ಪರಮಶಿವಯ್ಯರವರು ಜಯಗಳಿಸಿ ಅ೦ದಿನಿ೦ಂದ ಇಂದಿನವರೆವಗೂ ಆಡಳತ ಮಂಡಳಿಗೆ ಆಯ್ಕೆಯಾಗುತ್ತಾ ಬಂದು ಬ್ಯಾಂಕಿನ ಸರ್ವಾಂಗೀಣ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ. ಭಾರತೀಯ ರಿಸರ್ವ್‌ ಬ್ಯಾಂಕಿನ ಲೈಸೆನ್ಸ್‌ ಪಡೆದು ಕ್ರೆಡಿಟ್‌ ಸೊಸೈಟಿ ಇಂದ ಸಂಪೂರ್ಣ ಬ್ಯಾಂಕ್‌ ಆಗಿ ದಿನಾ೦ಕ 22-09-1986 ರಂದು ಪರಿವರ್ತ ನೆಗೊ೦ಡಿರುವುದಕ್ಕೆ ಮಾನ್ಯ ಬಿ . ಎಸ್‌. ಪರಮಶಿವಯ್ಯರವರ ಪಾತ್ರ ಅಸಾಮಾನ್ಯವಾದುದು.

ಶಾಖೆಗಳ ಪ್ರಾರಂಭ:
ಬೆ೦ಗಳೂರಿನ ಅಕ್ಕಿಪೇಟಿಯಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದ ಬ್ಯಾಂಕು ತನ್ನ ಕಾರ್ಯವನ್ನು ವಿಸ್ತರಿಸಿಕೊಳ್ಳುತ್ತಾ ನಗರದ ವಿಜಯನಗರದಲ್ಲಿ ಕಟ್ಟಡವನ್ನು ಖರೀದಿ ಮಾಡಿ ಬ್ಯಾಂಕಿಗೆ ಅನುಗುಣವಾಗಿ ಕಟ್ಟಡವನ್ನು ಮಾರ್ಪಡಿಸಿ ಇದನ್ನು ಆಡಳತ ಕಛೇರಿಯನ್ನಾಗಿರಿಸಿಕೊ೦ಡು ನೆಲಹ೦ತಸ್ತಿನಲ್ಲಿ ಶಾಖೆಯನ್ನೊಳಗೊಂಡು, ಬೆ೦ಗಳೂರಿನ ವಿವಿಧ ಪ್ರದೇಶಗಳಲ್ಲಿ ಅಂದರೆ ರಾಜಾಜಿನಗರ, ಬಸವೇಶ್ವರನಗರ, ಸುಂಕದಕಟ್ಟೆ, ಕೆ೦ಗೇರಿ ಉಪನಗರ, ಪೀಣ್ಯ ದಾಸರಹಳ್ಳಿ ಮತ್ತು ರಘುವನಹಳ್ಳಯಲ್ಲಿ ಶಾಖೆಗಳನ್ನು ತೆರೆದು ಆಯಾ ಪ್ರದೇಶಗಳಲ್ಲಿ ವಾಸವಾಗಿರುವ, ಆರ್ಥಿಕವಾಗಿ ಹಿ೦ದುಳದ ಬಡವಗ೯, ಮಧ್ಯಮವರ್ಗದವರನ್ನು ಸದೃಢಗೊಳಸಲು ಹಲವಾರು ಯೋಜನೆಗಳನ್ನು ರೂಪಿಸಿ ಆರ್ಥಿಕವಾಗಿ ಮಾಡಿಕೊಳ್ಳಲು ಅವಕಾಶ ನೀಡಿದೆ.

ಸದಸ್ಯರು ಹಾಗೂ ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತಾ ಬಂದಿದ್ದು, ತನ್ನ ಸದಸ್ಯರಿಗೆ ಆರ್ಥಿಕ ಸಬಲತೆಯನ್ನು ಕೊಡಿಸುವ ನಿಟ್ಟನಲ್ಲಿ ಸಮಾಜದ ಎಲ್ಲಾ ವರ್ಗದ ಜನರಿಗೆ ಆರ್ಥಿಕ ನೆರವು ನೀಡಿ ಅವರ ಸ್ವಾವಲ೦ಬನೆಗೆ ಸಹಕಾರ ನೀಡುತ್ತಾ ಬ೦ದಿದೆ. ಗ್ರಾಹಕರಿಗೆ ಹಾಗೂ ಸದಸ್ಯರುಗಳಗೆ ಎಲ್ಲಾ ಶಾಖೆಗಳಲ್ಲಿ ಲಾಕರ್‌ ಸೌಲಭ್ಯ, ಕೇಂದ್ರ ಕಛೇರಿ ಹಾಗೂ ಎಲ್ಲಾ ಶಾಖೆಗಳ ದೈನ೦ದಿನ ವ್ಯವಹಾರವು ಗಣಕೀಕರಣದ ಮೂಲಕ ನೆಡೆಸಲಾಗುತ್ತಿದ್ದು ತ್ವರಿತಗತಿಯಲ್ಲಿ ಸೇವೆ ನೀಡಲು ಸಾಧ್ಯವಾಗಿದ್ದು ಠೇವಣಿದಾರರ ಠೇೇವಣಿಗಳಗೆ ಬ್ಯಾಂಕಿನ ವತಿಯಂದ ವಿಮೆ ಮಾಡಿಸಿ ಭದ್ರತೆ ನೀಡಲಾಗಿದೆ.
ಸನ್ಮಾನ್ಯ ಶ್ರೀ ಬಿ. ಎಸ್‌. ಪರಮಶಿವಯ್ಯನವರ ಅಧ್ಯಕ್ಷತೆಯಲ್ಲಿ ವೀರಶೈವ ಸಹಕಾರಿ ಬ್ಯಾಂಕು ಪ್ರಸಕ್ತ 18503 ಸದಸ್ಯರುಗಳನ್ನು ಹೊಂದಿದ್ದು ರೂ.9.35 ಕೋಟಿ ಷೇರು ಬ೦ಡವಾಳವನ್ನು ಕ್ರೂಢೀಕರಿಸಿದೆ. ರೂ.332.01 ಕೋಟಿಗೂ ಹೆಚ್ಚು ಠೇವಣಿ ಸಂಗ್ರಹಣೆ ಮಾಡಿ ರೂ. 164.80 ಕೋಟಿಗೂ ಹೆಚ್ಚು ಸಾಲ ಸೌಲಭ್ಯಗಳನ್ನು ನೀಡಿದೆ. ಕೊಟ್ಟ ಸಾಲಗಳನ್ನು ಪರಿಣಾಮಕಾರಿಯಾಗಿ ವಸೂಲಿ ಮಾಡಿ ನಿವ್ವಳ ಶೂನ್ಯ ಎನ್‌.ಪಿ.ಎ ಪ್ರಮಾಣವನ್ನು ಕಾಪಾಡಿಕೊ೦ಡು ಬಂದಿದೆ. ಸುಮಾರು 28.76 ಕೋಟಿಯಷ್ಟು ಅಪದ್ಧನ ಮತ್ತು ಇತರೆ ನಿಧಿಗಳನ್ನು ಹೊ೦ದಿ ರೂ.177.31 ಕೋಟಿಯನ್ನು ಸರ್ಕಾರದ ಭದ್ರತೆಗಳು ಹಾಗೂ ಇತರೆ ಬ್ಯಾಂಕುಗಳಲ್ಲಿ ಹೂಡಿಕೆ ಮಾಡಿರುತ್ತದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೂ.2.61 ಕೋಟಿ ನಿವ್ವಳ ಲಾಛ ಗಳಸಲಾಗಿದೆ.

ಬ್ಯಾಂಕಿನಲ್ಲಿ ನಗದು ರಹಿತ ವ್ಯವಹಾರವನ್ನು ಪ್ರೋತ್ಸಾಹಿಸಲು ಆಧುನಿಕ ಸೌಲಭ್ಯಗಳಾದ NEFT/RTGS ಸೌಲಭ್ಯವನ್ನು ಹಾಗೂ ಯಾವುದೇ ವೇಳೆಯಲ್ಲಾದರೂ ಶೀಘ್ರವಾಗಿ ನಗದು ವರ್ಗಾವಣೆ ಮಾಡಲು ಬ್ಯಾಂಕ್ ಆಪ್‌ ಹೊಂದಿದ್ದು ಸದರಿ ಆಪ್‌ ಮೂಲಕ IMPS (Immediate Payment Service) ಜೊತೆಗೆ UPI Productಗಳಾದ Google Pay, PhonePe, Paytm, Utility Bill Payments ಸೌಲಭ್ಯವನ್ನು ನೀಡಲಾಗುತ್ತಿದೆ. QR Code ಮೂಲಕ ಹಣ ವರ್ಗಾವಣೆ ಮಾಡುವ ಸೌಲಭ್ಯವನ್ನು ಸಹ ಕಟ್ಟಸಿಕೊಡಲಾಗಿದೆ. ಆದುದರಿ೦ದ ಎಲ್ಲಾ ಸದಸ್ಯರುಗಳು / ಗ್ರಾಹಕರುಗಳು ತಮ್ಮ Android ಮೊಬೈಲ್‌ನಲ್ಲಿ ನಮ್ಮ ಬ್ಯಾಂಕಿನ ಆಪ್‌ನ್ನು ಅಳವಡಿಸಿಕೊಂಡು ಡಿಜಟಲ್‌ ಬ್ಯಾಂಕಿಂಗ್‌ ಸೇವೆಗಳನ್ನು ಉತ್ತೇಜಸಲು ಬ್ಯಾ೦ಕಿನಿ೦ದ ನೀಡುತ್ತಿರುವ ಆಧುನಿಕ ಸೇವೆಗಳ ಸದುಪಯೋಗ ಪಡೆಯಲು ಕೋರುತ್ತೇವೆ.

ಬ್ಯಾಂಕು ತನ್ನ ಈ 52 ವರ್ಷಗಳ ಸುದೀರ್ಥ ಪ್ರಯಾಣದಲ್ಲಿ ಹಲವು ಏಳು-ಬೀಳುಗಳ ನಡುವೆ ಸಮಾಜದ ಪ್ರಗತಿಗೆ ಸಹಕಾರ ನೀಡುತ್ತಾ ಪ್ರತಿಷ್ಠಿತ ಸಹಕಾರಿ ಬ್ಯಾಂಕಾಗಿ ಬೆಳೆಯುತ್ತಿದೆ.

ಠೇವಣಿ ವಿಮಾ ಯೋಜನೆ:
ಬ್ಯಾಂಕಿನ ಗ್ರಾಹಕರುಗಳ/ಸದಸ್ಯರುಗಳ ಠೇವಣಿಗಳ ಭದ್ರತೆ ದೃಷ್ಟಿಯ೦ದ ಎಲ್ಲಾ ಠೇವಣಿಗಳಗೆ DICGC (Deposit Insurance and Credit Guarantee Corporation) ರವರ ವಿಮಾ ಯೋಜನೆಯಡಿಯಲ್ಲಿ ವಿಮೆ ಮಾಡಿಸಲಾಗಿದೆ. ಠೇವಣಿದಾರರಿಗೆ ಗರಿಷ್ಠ ರೂ. ೫.೦೦ ಲಕ್ಷಗಳವರೆಗೆ ವಿಮಾ ಮೊತ್ತ ಪಡೆಯಲು ಅವಕಾಶವಿದೆ.

ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಯೋಜನೆ:
ಕರ್ನಾಟಕ ಸರ್ಕಾರವು ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಯೋಜನೆಯನ್ನು ಪಟ್ಟಣ ಸಹಕಾರಿ ಬ್ಯಾಂಕುಗಳ ಸದಸ್ಯರಿಗೂ ವಿಸ್ತರಿಸಲಾಗಿರುತ್ತದೆ.  ಸದಸ್ಯರ ಕುಟುಂಬದ ವಾರ್ಷಿಕ ವೈದ್ಯಕೀಯ ವೆಚ್ಚ ರೂ. 8.00 ಲಕ್ಷದ ಮಿತಿಯನ್ನು ಒಳಗೊಂಡಿದ್ದು, ಇದರ ಸೌಲಭ್ಯವನ್ನು ಪಡೆದಿರುವ ಸದಸ್ಯರು ಯಶಸ್ವಿನಿ ಗುರುತಿನ ಕಾರ್ಡ್‌ಗಳನ್ನು ಬಳಸಿ ಚಿಕಿತ್ಸೆಗಳನ್ನು ಪಡೆಯಬಹುದಾಗಿರುತ್ತದೆ. ಯಶಸ್ವಿನಿ ಯೋಜನೆಯಡಿಯಲ್ಲಿ ಮುಖ್ಯವಾಗಿ ಹೃದಯಕ್ಕೆ ಸಂಬ೦ಧಿಸಿದ ರೋಗಗಳು ಕಿವಿ. ಮೂಗು, ಗಂಟಲು ವ್ಯಾದಿಗಳು, ಕರುಳಿನ ಕಾಯಲೆಗಳು, ನರಗಳಗೆ ಸ೦ಬ೦ಧಿಸಿದ ಖಾಯಿಲೆಗಳು, ಕಣ್ಣು, ಮೂಳೆ ಇತರೆ ಅನುಸೂಚಿತ ಸಾಮಾನ್ಯ ರೋಗಿಗಳಗೆ ಸಂಬಂಧಿಸಿದ ಚಿಕಿತ್ಛಾ ಸೌಲಭ್ಯಗಳು ರಾಜ್ಯದ ಯಶಸ್ವಿನಿ ನೆಟ್‌ವರ್ಕ್‌ ಆಸ್ಪತ್ರೆಗಲ್ಲಿ ಪಡೆಯಬಹುದು.

About

Veerashiva Sahakari Bank is  a Beacon of Progress and Social Welfare Veerashiva Sahakari Bank, a prominent cooperative bank in Bangalore, has been a beacon of hope and financial empowerment for over five decades.

Contact

1732/32, M.C. Road,
MC Layout, Vijayanagar, Bengaluru – 560040, Karnataka.

Phone No : 080-23358017

© 2024, All rights reserved. Powered by Ganaka Labs